Navigation |
|
|
|
|
|
|
|
|
|
|
|
|
|
Ashwath Kabbinale
ನಂಗಂತೂ ಖುಷಿ ಯಾಕೋ ಏನೋ...'ಜೈ ವಿಟ್ಟಲ ಹರಟೆ ಕಟ್ಟೆಯ'ಸ್ಪರ್ಶ ಸುಕ.ಒಂದು ವರ್ಷ ನಿಮ್ಮೊಂದಿಗೆ ನಾನು ಕುಂತುಕೊಂಡೆ ಆದರೆ ಮಾತಾಡಿಲ್ಲ.. ಹರಟೆ ಹೊಡಿಲಿಲ್ಲ...ಅಂದ್ರೆ ಬ್ಲಾಗ್ನಲ್ಲಿ ಬರೀಲಿಲ್ಲ..ಆದ್ರೆ ಬ್ಲಾಗ್ನ ಹೆಚ್ಚಿನ ಬರಹ ಓದಿದ್ದೇನೆ.. ಇ ಬ್ಲಾಗ್ ಸ್ನೇಹಿತರು ಕಟ್ಟಿದ ಗೂಡು ಇ ಗೂಡಿನಿಂದ ಮನಸಿನ ಹಲವು ಬಣ್ಣಗಳು ಮೊಟ್ಟೆಯಾಗಿ ಬಂದು ಹಕ್ಕಿಯಾಗಿ ಹಾರುತ್ತಿರುವದು ಇ ಗೂಡಿನ ಬೆಚ್ಚನೆಯ ಕಾವಿನಿಂದ ಬಂದ ಅಂತರಂಗದ ಕಲರವದ ಪ್ರತಿಪಲನ.ಮನದ ಮೂಲೆಗೆ ಕಚಗುಳಿಯಿಟ್ಟಾಗ ನೆನಪ ಮೂಸೆಯಿಂದ ಹೊರಬಂದ ಜೀವಕಣಗಳನ್ನು ಇ ಬ್ಲಾಗ್ ಗರ್ಬದಲ್ಲಿ ಧರಿಸಬೇಕಾಗಿದೆ.ಬರವಣಿಗೆಯ ಆಕರ್ಷಣೆಯು ಕಾಯಾಗಿ ಬಲಿತು ಹಣ್ಣಾಗಿ ಇನ್ನೊಂದು ಲೆಕನಕ್ಕೆ ಬೀಜವಾಗುವ ಅರ್ಥವಂತಿಕೆಯನ್ನು ಸರ್ಥಕ್ಯತೆಯನ್ನು ಪಡೆಯಬೇಕಾಗಿದೆ. ಓದುಗರು ಮತ್ತು ಲೇಕಕರು ಬಿನ್ನವೆಂದು ಎಣಿಸದೆ ಎಲ್ಲರು ಎರಡು ಪತ್ರವನ್ನು ನಿರ್ವಹಿಸಬೇಕೆಂಬ ಬ್ಲಾಗನ್ ಉದ್ದೇಶವನ್ನು ಮುಂದುವರಿಸಿದ್ದೆನೆಂಬ ನಂಬಿಕೆ ನನ್ನದು. ಇ ನಿಟ್ಟಿನಲ್ಲಿ ಸಂಚಿಕೆ ದಿಕ್ಕನ್ನು ಬದಲಾಯಿಸದೆ ನಾಲ್ಕು ಹೆಜ್ಜೆ ಮುಂದೆ ಸರಿದಿದೆಯೆಂಬ ನಂಬಿಕೆ ಸರಿಯಾದರೆ ಅದೇ ನಮ್ಮ ಹೆಗ್ಗಳಿಕೆ. ಅಂತೆಯೇ ಇ ಹರಟೆ ಕಟ್ಟೆ ಅನುಭವಗಳ ಸಂವಹನದ ವ್ಯವಸ್ತೆ, ಇದನ್ನು ಓದುಗ ಮಿತ್ರರು ಅನ್ವಯಿಸಿ ಸಂಯೋಗಿಸಿಕೊಳ್ಳಬೇಕು. ವ್ಯಾಪಕವಾಗಿ ವಿಸ್ತರಿಸಬೇಕು.ಆ ಮೂಲಕ ನಿರ್ವಚನಗೊಳ್ಳುವ ಎಲ್ಲ ಬಗೆಯ ಬೌದ್ದಿಕ ಕತನವು ನಮ್ಮ ಅಸ್ತಿತ್ವದ ಸಂವರ್ದೆನೆಗೆ ಆಹಾರ ವಾಗುತ್ತದೆ. ಅಭಿಪ್ರಾಯ ಮಂಡನೆಗೆ ಯಾವುದೇ ಬಗೆಯಾ ಗಡಿಯೂ ಇಲ್ಲ. ಸ್ಯದ್ದಂತಿಕ ಬಿನ್ನಬಿಪ್ರಯಗಲಿದ್ದರು ಅದು ಪ್ರಾಮಾಣಿಕ ವಾಗಿರಬೇಕು. ಗೆಳೆತನದ ಸವಿಮಾದುರ್ಯದ ಮುಕಾಮುಕಿಯಗುತ್ತಲೇ ಸಾಮಾಜಿಕ ಸಂಬದಗಳ ಸಮಸ್ಟಿ ಮೌಲ್ಯಗಳು ಇ ಕಟ್ಟೆಯಿಂದ ಪುನರ್ ಸ್ರಸ್ತಿಯಾಗಬೇಕು. ನಮ್ಮ ಅಸ್ತಿತ್ವವನ್ನು ಪುನರುಜ್ಜಿವನಗೊಳಿಸುವ ದಾರಿಯಲ್ಲಿ ನಾವು ಬೆಳೆದ ಬೇರುಗಳಿಂದಲೇ ಜಗತ್ತಿನ ತುದಿಯನ್ನು ಮುಟ್ಟಬಹುದು. ಜಾಗತೀಕರಣದ ಕದಂಬ ಬಾಹುಗಳಿಂದ ಹೊಸಕಿಂಡಿಯ ಮೂಲಕ ನಾವೆಲ್ಲ ಹೊರಬರಬೇಕಾಗಿದೆ ಮೈ ಚಳಿ ಬಿಟ್ಟು ಹಣ ಉತ್ಪಾದಿಸುವ ಯಂತ್ರಗಳಾಗದೆ ಮೈಮರೆಯದೆ ಸಾಂಸ್ಕೃತಿಕವಾಗಿ - ಸಾಹಿತ್ಯಿಕವಾಗಿ ತೊಡಗಬೇಕು. 'ವರದ ತೀರದ ಅನುಭವಗಳು' ಬಳಗ ಬಾಕ್ಸ ಗಳನ್ನೂ ತುಂಬಬೇಕು.ಮುಕ್ಯವಾಗಿ ಕಟ್ಟೆಯ ಮೇಲೆ ಕೂಟ ಹೆಣ್ಣುಮಕ್ಕಳು ಮೌನಮುರಿದು ಅನುಭವದ ಒಗ್ಗರಣೆಯ ಸುಗಂಧವನ್ನು ಲೇಖನಿಯ ಮೂಲಕ ಹರಿಸಬೇಕಾಗಿದೆ . ಒಬ್ಬ ನೈಜ ಓದುಗ ಖಂಡಿತವಾಗಿ ಲೇಖನಿ ಹಿಡಿಯಬಲ್ಲ, ಒಬ್ಬ ಕೇಳುಗ ಭಾಷಣಕಾರನಗಬಲ್ಲ, ಹಾಗಾದರೆ ಸರಿ ಮತ್ತೆ.....ಬರೀತೀರಾ....ಪ್ಲೀಸ್..... ಕನ್ನಡ ರಾಜ್ಯೋತ್ಸವದ ಶುಭಾಶಯದೊಂದಿಗೆ ........ ಕಬ್ಬಿನಾಲೆ ಅಶ್ವಥ್ ಭಾರದ್ವಾಜ
|
|
|
|
|
|
|
There Have been 1 visitors (1 hits) on this page!
WELCOME YOU ALL
|
|
|
|
|
|
|
|