-
Story
  Savi Savi Nenapu
 

 

                    ಬಾಳ ತೇರನ್ನು ಎಳೆದವನಿಗೆ  

Sahana Janardhan Hebbar

 
ನನ್ನ ಪ್ರೀತಿಯ ಜೀವನ್ ಗೆ,
 
ಬದುಕಿಗೆ ಸಾವಿರ ಕವಲು ದಾರಿಗಳಿವೆ , ನಾನು ಪ್ರೀತಿಯ ಹಾದಿಯಲ್ಲಿ ನಿನ್ನ ಹುಡುಕುತ್ತಾ ಬಂದವಳು , ಚಿಟ್ಟೆಯ ರಂಗಿನ ರೆಕ್ಕೆಯೆಂತ ಚಂಚಲ ಮನಸು ನನ್ನದು . ನಮ್ಮ ಇಬ್ಬರ ಭೇಟಿಯಾದ ಮೇಲೆ ನಾನೆ ಮುಂದಾಗಿ, ಬಿಗುಮಾನ ಮರೆತು "ನೀನೆ ನೀನೆ , ನನಗೆಲ್ಲಾ ನೀನೆ " ಅನ್ನೋ ತರ ಆಗಿ ಹೋದೆ . ಮಾಗಿದ ಮನಸು ಮುಗ್ಗುಲು ಹಿಡಿಯುವ ಮೊದಲು ನೀನು ನನಗೆ ಸಿಕ್ಕಿದು ನನ್ ಪುಣ್ಯ . ಶತಮಾನಗಳಿಂದ ನಿನಗೆ ಕಾಯ್ತಾ ಇರುವನೇನೋ   ಅನ್ನೋ ಅಷ್ಟು  ಹತ್ತಿರವಾಗಿ ಹೋದೆ ನೀನು . ನನ್ನೂರಿನಲ್ಲಿ ಮಳೆ ಸುರುಯುತಿದ್ದರೆ ದೊಡ್ಡ ಕಿಟಕಿಯ ಸರಳುಗಳ ಹಿಂದೆ ನಿಂತು ಸುರಿವ ನೀರ ಎಳೆಗಳನ್ನು ನೋಡುತ "ಬರುವನೆನೆ ಸಖಿ ಚಲುವ " ಅಂತ ಹಾಡುತ ಇದ್ದೆ. ಆದರೆ ಆ  ಕ್ಷಣಕ್ಕೆ ನನ್ನ ಎದುರಿಗೆ ನಿಂತ ನಾನು ಈ  ಪ್ರಶ್ನೆ ಕೇಳಿಕೊಂಡಾಗ ಎಲ್ಲಾ ಹೃದಯ ಲಯ ತಪ್ಪುತ್ತಿತ್ತು , ಪ್ರತಿ ಕ್ಷಣ ಈ ತರಹದ  ಪ್ರಶ್ನೆ ಗಳು ನನ್ನ ಹಿಂಡಿ ಹಿಪ್ಪೆ ಮಾಡಿ ಬಿಡುತ್ತಿದ್ದವು .ಇಂದು ಎಲ್ಲದಕ್ಕೂ ನೀನು ನನ್ನ  ಕೈ ಹಿಡಿದು ಉತ್ತರ ಕೊಟ್ಟೆ . ಕಪ್ಪು ಹುಡುಗಿ ಅಂತ ಬಿಟ್ಟು ಹೋದವರಿಗೆ ಇವಳು ಎಷ್ಟು ಚಂದ ಅಂತ ತೋರಿಸಿಕೊಟ್ಟೆ. ನೀನು ಬರೆದ ಕವನ ಅದು ಎಷ್ಟು ಸಲ ಓದಿದಿನೇನೋ ದೇವರೇ ಬಲ್ಲ. ಕೊನೆಗೂ ಮೊದಲ ಸಲ ಈ ಎದೆಯ ಬಡಿತಗಳಿಗೆ ಪ್ರೀತಿಯ ಹೆಸರು ಬಿಡಿಸಿದ ಚಿತ್ರಕಾರ ನೀನು . ಬದುಕಿನ  ಪ್ರೀತಿಯ  ತೇರನ್ನು ಎಳೆಯೋಕೆ  ನೀನು ಕರೆದೆ , ನಾನು ಸದ್ದಿಲದೆ ನಿನ್ನ ಜೊತೆ ಹೆಜ್ಜೆ ಹಾಕಿದೆ .
 
 ನೆನಪಿದೆಯಾ ನಿಂಗೆ ? ಮೊದಲ ಸಲ ನೀನು ನಮ್ಮ  ಮನೆಗೆ ಹುಡುಗಿ ನೋಡೋಕ್ಕೆ ಬಂದಾಗ ತುಂಬ  ರಿಸರ್ವ್ ಆಗಿ ಕೂತಿದ್ದೆ . ಆಗ ನಂಗೆ ತಲೆ ತುಂಬಾ ಯೋಚನೆ, ಅಯ್ಯೋ ಇವನ ಜೊತೆ ಹೇಗಪ್ಪ ಜೀವನ ಮಾಡೋದು ಅಂತ, ಆದರೆ ಪರಿಚಯ ಆದಮೇಲೆ ಗೊತಾಗಿದ್ದು ನೀನು ಎಷ್ಟು ತುಂಟ ಅಂತ !! ನಾನು ತಿಳಿ ಗುಲಾಬಿ ಬಣ್ಣ, ನಕ್ಷತ್ರ ಚಿತ್ತಾರದ  ಸೀರೆ ಉಟ್ಟುಕೊಂಡು ಬಂದಾಗ ನನ್ನ ಬರಸೆಳೆದು ಹೂ ಮುತ್ತು ಕೊಟ್ಟಿದ್ದು  ಎಲ್ಲಾ ನೆನಪಿನ ಆಗರದಲ್ಲಿ ಕಚಕುಳಿ ಕೊಡುತ್ತ  , ಆಡುತ್ತ  ಇರುತ್ತೆ.
                                    ಆದರೆ ಒಂದು ಒಂದು ಸಲ ಭಾವನೆ ಗಳು ಬಿಚ್ಚಿಕೊಂಡು ಆಟ ಆಡುತ್ತ  ಇರುವಾಗ , ಕನಸುಗಳು ಕರಗುತದೆ ಅಂತ ಭೀತಿ ಎದುರಾದಾಗ ಮೈ ಮರೆತು ನಿನ್ನ ಬಗ್ಗೆ ಯೋಚಿಸುತ್ತಿನಿ , ಆಗ ನನ್ನ ಕನಸಿಗೆ ಹೊಳಪು , ಬದುಕಿಗೆ ಗುರಿ ಸಿಗುತ್ತೆ. ಇಷ್ಟು  ನಿನ್ನ ಪ್ರೀತಿಸೋ ನಾನು ಕೆಲವೊಂದು ಸಲ ಯಾಕೆ ನಿನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿನಿ  ಅಂತ ನಂಗೆ  ಅರ್ಥ ಆಗೋಲ್ಲ,  ಸಾರೀ  ಮೈ  ಡಿಯರ್  , ಬೇಜಾರು ಮಾಡಿಕೊಳ್ಳಲ್ಲ ತಾನೆ ? !
 
ಕೊನೆ ಮಾತು.
ಮನಸಿನನಲಿ ಹುಗಿದು ಹೋದ ಎಲ್ಲಾ ಮಾತು ನಿನ್ನ ಎದುರಿಗೇ ನಿಂತು ಹೇಳೋಕ್ಕೆ ಆಗೋಲ್ಲ. ಅದಕ್ಕೆ " ಹಾಗೆ ಸುಮ್ಮನೆ" (ನಾವು ಇಬ್ಬರು ಜೊತೆಯಾಗಿ ನೋಡಿದ ಮೊದಲ ಸಿನಿಮಾ  )
ಒಂದು Surprice  ಕೊಡೋಣ ಅಂತ ಈ ಪತ್ರ .
               ಎಲ್ಲಿಯವರೆಗೆ ಈ ಕಾಯುವಿಕೆ , ಚಡಪಡಿಕೆ  ನಮ್ಮ  ಜೊತೆಗೆ ಇರುತ್ತೋ  ....... ಅಲ್ಲಿವರೆಗೆ ಪ್ರೀತಿ ನಮ್ ಕೈ ಹಿಡಿದಿರುತ್ತೆ  ಅಂತ ನನ್ನ  ನಂಬಿಕೆ. ನಿನ್ನ ನಂಬಿಕೆ ಕೂಡ  ಅಲ್ವ !!
ನಿಂಗೆ ಈ ಪತ್ರ ಇಷ್ಟ  ಆದರೆ ನಂಗೆ ಒಂದು ಹೂ ಮುತ್ತು  ಮೆಸೇಜ್  ಮಾಡುತ್ತಿಯ? ಕಾಯುತ್ತ  ಇರುತ್ತೀನಿ   ಚಿನ್ನು ..............
 
ಇಂತಿ ನಿನ್ನ
ಭಾವನಿ ......


 
  There Have been 2 visitors (3 hits) on this page! WELCOME YOU ALL  
 
This website was created for free with Own-Free-Website.com. Would you also like to have your own website?
Sign up for free